ಎರೆಹುಳುನ ಜೀವಿನ ಚರಿತ್ರೆ

naipagropediaraichur's pictureLocation: 

Language: 

KM1.0 Tags: 

Document Type: 

  • Text

ಎರೆಹುಳುನ ಜೀವಿನ ಚರಿತ್ರೆ

 

ಎಲಬು ರಹಿತ ದೇಹದ ನಿಶಾಚಾರಿ ಎರೆಹುಳು ಬೆಳಕನ್ನು ದ್ವೇಷಿಸುತ್ತದೆ. ಪ್ರತಿಯೊಂದು ಎರೆಹುಳು ತನ್ನ ಜೀವಿತ ಅವಧಿಯಲ್ಲಿ ಸುಮಾರು 50-100 ಕೋಶಗಳನ್ನು ಇಡುತ್ತದೆ. ಪ್ರತಿ ಕೋಶದಿಂದ 2-3 ಮರಿಗಳೂ 15-20 ದಿವಸಗಳಲ್ಲಿ ಹೊರಗೆ ಬರುತ್ತವೆ. ಮುಂದೆ 40-60 ದಿವಸಗಳಲ್ಲಿ ಅವು ಅರೆಪ್ರೌಢವಸ್ಥೆ ಮುಗಿಸಿ ಪ್ರೌಢಾವಸ್ಥೆಯನ್ನು ತಲುಪುತ್ತವೆ. ಈ ರೀತಿಯಲ್ಲಿ ಒಂದು ಎರೆಹುಳು ತನ್ನ ಜೀವನಚಕ್ರವನ್ನು ಮುಗಿಸಲು ಸುಮಾರು 50-80 ದಿನಗಳಲ್ಲಿ ತೆಗೆದುಕೊಳ್ಳುತ್ತದೆ.

 

        ಎರೆಹುಳು ಆಹಾರದೊಡನೆ ಸೂಕ್ಷ್ಮಾಣುಜೀವಿಗಳನ್ನು ತನ್ನ ಅನ್ನನಾಳದಲ್ಲಿ ತೆಗೆದುಕೊಳ್ಳುತ್ತದೆ. ಈ ಸೂಕ್ಷ್ನಾಣುಜೀವಿಗಳು ಎರೆಹುಳುವಿನ ಅನ್ನನಾಳದಲ್ಲಿ ಅಧಿಕ ಸಂಖ್ಯೆಯಲ್ಲಿ ವೃದ್ಧಿಹೊಂದಿ ಹಿಕ್ಕೆಯೊಡನೆ ಹೊರಬರುತ್ತವೆ. ಇದರಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಎಕ್ಟಿನೋಮೈಸಿಟೀಸ್ ಜೀವಿಗಳು ಬೆಳೆಗಳಿಗೆ ಅತ್ಯವಶ್ಯವಿರುವ ಬೆಳೆವರ್ಧಕ, ಬಿಟ್ಯಾಮಿನ್ ಮತ್ತು ಆ್ಯಂಟಿಬಯೋಟಿಕ್ ಪದಾರ್ಥಗಳನ್ನು ಹೇರಳ ವಾದ ಪ್ರಮಾಣದಲ್ಲಿ ಉತ್ಪಾದಿಸುತ್ತವೆ.

 

Rating: 

0
No votes yet