ಎರೆಜಲ ಮತ್ತು ಅದರಿಂದ ಪಡೆಯುವ ವಿಧಾನ

naipagropediaraichur's pictureLocation: 

Language: 

KM1.0 Tags: 

Document Type: 

  • Text

ಎರೆಜಲ ಮತ್ತು ಅದರಿಂದ ಪಡೆಯುವ ವಿಧಾನ

ಎರೆಜಲ

ಎರೆಹುಳುಗಳನ್ನು ತ್ಯಾಜ್ಯ ಪದಾರ್ಥ ಮತ್ತು ಸಗಣಿಯಲ್ಲಿ ಸಾಕಾಣಿಕೆ ಮಾಡುವಾಗ ನೀರಿನ ಮೂಲಕ ಪಡೆಯುವ/ ಎರೆಹುಳುಗಳನ್ನು ನೀರಿನಿಂದ ತೊಳೆದು ಬಂದ ದ್ರಾವಣಕ್ಕೆ ಎರೆಜಲ ಎನ್ನುವರು. ಎರೆಜಲವು ಬೆಳೆ ಪ್ರಚೋಧಕ ವಸ್ತು ಹಲವಾರು ಪೋಷಕಾಂಶಗಳು ಮತ್ತು ಸೂಕ್ಷ್ಮಾಣುಜೀವಿಗಳಿಂದ ಸಮೃದ್ಧಿಯಾಗಿದ್ದು ಬೆಳೆಗಳಿಗೆ ಸಿಂಪರಣೆ ಅಥವಾ ಗಿಡಗಳ ಬುಡಕ್ಕೆ ಹಾಕುವ ಮೂಲಕ ಬಳಸಬಹುದಾಗಿದೆ.

ಎರೆಜಲ ಪಡೆಯುವ ವಿಧಾನ

ಒಂದು ದೊಡ್ಡ ಪಾತ್ರೆಯಲ್ಲಿ ಒಂದು ಸಣ್ಣಪಾತ್ರೆಯನ್ನು ತಲೆಕೆಳಗಾಗಿ ಇಡಬೇಕು. ಎರಡೂ ಪಾತ್ರೆಗಳ ಒಳಗೆ ಸೇರುವಂತೆ ಒಂದು ಪ್ಲೈನ್ ಸೇರಿಸಿ ಹೊರಗಡೆ ಒಂದು ನಳವನ್ನು ಜೋಡಿಸಬೇಕು. ನಂತರ ಚೆನ್ನಾಗಿ ಕಳೆತ ಸಾವಯವ ವಸ್ತುಗಳನ್ನು ದೊಡ್ಡಪಾತ್ರೆಯಲ್ಲಿರುವ ಉಸಿಕಿನ ಪದರಿನ ಮೇಲೆ ತುಂಬಿ, ಪ್ರತಿ 100 ಕಿ.ಗ್ರಾಂ ಸಾವಯವ ವಸ್ತುವಿನಲ್ಲಿ 5 ಕಿ.ಗ್ರಾಂ ಎರೆಹುಳಗಳನ್ನು ಬಿಡಬೇಕು. ನಂತರ ದಿನಂಪ್ರತಿ 5 ಲೀಟರ್ ನೀರನ್ನು 50 ನೇ ದಿನದವರೆಗೆ ಹಾಕಬೇಕು. ಈ ನೀರು ಎರೆಹುಳು ಮತ್ತು ಎರೆಗೊಬ್ಬರವನ್ನು ತೊಳೆದು, ಬಸಿದು ಸಣ್ಣ ಪಾತ್ರೆಯಲ್ಲಿ ಸಂಗಹವಾಗುತ್ತದೆ. ಇದುವೇ ಎರೆಜಲ.

ಎರೆಜಲವನ್ನು ಇನ್ನೂ ಹಲವಾರು ತರಹದ ಪಾತ್ರೆಗಳು ಅಥವಾ ಡಬ್ಬಿಗಳಿಂದ ತಯಾರಿಸಿದ ಉಪಕರಣಗಳನ್ನು ಬಳಸಿಕೊಂಡು ತೆಗೆಯಬಹುದಾಗಿದೆ. ಉದಾ: ಪ್ಲಾಸ್ಟಿಕ್ ಡಬ್ಬಿಗಳಿಂದ ತಯಾರಿಸಿದ ಉಪಕರಣದಿಂದಲೂ ಎರೆಜಲ ತೆಗೆಯಬಹುದಾಗಿದೆ. ಬೆಳೆಗಳಲ್ಲಿ ಎರೆಜಲವನ್ನು 1:3 ರಿಂದ 1:5 (ಎರೆಜಲ : ನೀರು) ಅನುಪಾತದಲ್ಲಿ ಬಳಸಿದಾಗ ಬೆಳೆಯ ಬೆಳವಣಿಗೆ ಸುಧಾರಣೆಯಾಗುವುದಲ್ಲದೆ,     ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ.

 

Source: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ 2012, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು

Rating: 

0
No votes yet