ಎರೆಗೊಬ್ಬರ ತಯಾರಿಸುವ ವಿಧಾನ

naipagropediaraichur's pictureLocation: 

Language: 

KM1.0 Tags: 

Document Type: 

  • Text

ಎರೆಗೊಬ್ಬರ ತಯಾರಿಸುವ ವಿಧಾನ

ಮಡಿ ತಯಾರಿಸುವುದು

                ಪ್ರಾರಂಭಿಕ ಹಂತದಲ್ಲಿ ಎರೆಹುಳುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ವೃದ್ಧಿಪಡಿಸ ಬೇಕಾಗಿರುವುದರಿಂದ, ಸಾಧ್ಯವಾದಷ್ಟು ಸಣ್ಣದಾದ ಮಡಿಯನ್ನು ತಯಾರಿಸಬೇಕು. 10 ಮೀ. ಉದ್ದ, 1 ಮೀ. ಅಗಲ ಮತ್ತು 0.3 ಮೀ, ಆಳದ ಮಡಿಯು ಉತ್ತಮ. ತಳವನ್ನು ಹೊರತುಪಡಿಸಿ ಒಳಮೈಗೆ ತೆಳುವಾದ ಕಲ್ಲುಗಳನ್ನು ಸುಮಾರು 5 ಸೆಂ.ಮೀ. ಭೂಮಿಯ ಮೇಲೆ ಕಾಣುವಂತೆ ಜೋಡಿಸಿದ ಮಡಿಯು ಸೂಕ್ತವಾಗಿರುವುದು. ನೀರಾವರಿ ಪ್ರದೇಶದಲ್ಲಿ ಭೂಮಿಯ ಮೇಲೆ ತೆಳುವಾದ ಕಲ್ಲುಗಳೀಂದ ಅಥವಾ ಇಟ್ಟಿಗೆಯ ಗೋಡೆಯಿಂದ ನಿರ್ಮಿಸಿದ ಮಡಿಗಳೂ ಸೂಕ್ತವಾಗಿರುತ್ತವೆ.

                ಮಡಿಯು ತಯಾರಾದ ಕೂಡಲೇ ಮಡಿಯಲ್ಲಿ ಗೆದ್ದಲು, ಇರುವೆಗಳ ಚಟುವಟಿಕೆ ಕಂಡುಬಂದಲ್ಲಿ ಕ್ಲೋರ್‍ಪೈಫಾಸ್ 20 ಇ.ಸಿ ಕೀಟನಾಶಕವನ್ನು ಪರತಿ ಲೀಟರ್ ನೀರಿಗೆ 2 ಮಿ.ಲೀ. ಬೆರೆಸಿ ಮಡಿಗೆ ಸರಿಯಾಗಿ ಸಿಂಪರಣೆ ಮಾಡಬೇಕು. 10 ದಿನಗಳ ನಂತರ ಸಾವಯವ ತ್ಯಾಜ್ಯ ಪದಾರ್ಥಗಳು ಸಗಣಿ ಮತ್ತು ಉಳಿದ

ಮಡಿಯ ತಳದಿಂದ ಅನುಕ್ರಮವಾಗಿ

ತ್ಯಾಜ್ಯ ಪದಾರ್ಥ ಹೊಂದಿದ ಕಚ್ಚವಸ್ತುಗಳಿಂದ ಈ ಕೆಳಗೆ ತಿಳಿಸಿದಂತೆ ತುಂಬಬೇಕು.

1.            ತೆಂಗಿನ ಸಿಪ್ಪೆ ಅಥವಾ ನೀರು ಹಿಡಿಯುವ ವಸ್ತು

2.            ಸಗಣಿ ಅಥವಾ ಬಯೋಗ್ಯಾಸ್ ಸ್ಲೆಡ್ಜ್ ಅಥವಾ ಯಾವುದೇ ಪ್ರಾಣಿಯ ಹಿಕ್ಕೆ.

3.            ಕೃಷಿ ತ್ಯಾಜ್ಯ ವಸ್ತುಗಳು ಅಥವಾ ಒಣಗಿದ ಕಸಕಡ್ಡಿ.

4.            ಸಗಣಿ ಅಥವಾ ಬಯೋಗ್ಯಾಸ್ ಸ್ಲೆಡ್ಜ್ ಅಥವಾ ಯಾವುದೇ ಪ್ರಾಣಿಯ ಹಿಕ್ಕೆ.

5.            ಹಸಿರು ಎಲೆಗಳು (ಹುಲ್ಲು ಕಳೆ ಇತ್ಯಾದಿ)

6.            ಎರೆಮಣ್ಣು ಅಥವಾ ತೋಟದ ಮಣ್ಣು.

7.            ಭತ್ತದ ಹುಲ್ಲು, ಸಾವಿಯ ಹುಲ್ಲು, ಜೋಳದ ದಂಟು ಇತ್ಯಾದಿ.

 

              ಚಿತ್ರದಲ್ಲಿ ತೋರಿಸಿದಂತೆ ಎಲ್ಲಾ ತ್ಯಾಜ್ಯ ವಸ್ತುಗಳನ್ನು ಮಡಿಯಲ್ಲಿ ಅನುಕ್ರಮವಾಗಿ ತುಂಬಬೇಕು. ಅ.ಸಂ. 3 ರಲ್ಲಿ ಬರುವ ಕೃಷಿ ತ್ಯಾಜ್ಯ ವಸ್ತುಗಳನ್ನು ಮತ್ತು ಅ.ಸಂ.6 ರಲ್ಲಿ ಬರುವ ಎರೆಮಣ್ಣನ್ನು ಹೊರತುಪಡಿಸಿ, ಉಳಿದ ವಸ್ತುಗಳನ್ನು (ಅ.ಸಂ. 1,2,3,4,5) 6-10 ಸೆಂ.ಮೀ. ದಪ್ಪದಲ್ಲಿ ತುಂಬಬೇಕು. ಕೃಷಿ ತ್ಯಾಜ್ಯವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ (15-20 ಸೆಂ.ಮೀ.) ಉಪಯೋಗಿಸಬೇಕು. ನಂತರ 16 ದಿನಗಳವರೆಗೆ ಪ್ರತಿದಿನ 30-60 ಲೀಟರ್ ನೀರನ್ನು ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ಮಡಿಯಲ್ಲಿ ತುಂಬಿರುವ ಪದಾರ್ಥಗಳು ಬೇಗನೇ ಕಳಿಯಲಿಕ್ಕೆ ಪ್ರಾರಂಭಿಸುವವು. ನಂತರ ಸುಮಾರು 1000-2000 ಎರೆಹುಳುಗಳನ್ನು (ಯುಡ್ರಿಲಸ್ ಯುಜಿನಿಯೆ ಪ್ರಭೇಧ) ಮಡಿಯಲ್ಲಿ 10 ಸೆಂ.ಮೀ. ಆಳದಲ್ಲಿ ಬಿಡಬೇಕು. ನಂತರ ಮಡಿಯ ಮೇಲೆ ಪ್ರತಿ ಚದರ ಮೀಟರ್ ಅಳತೆಗೆ 100 ಗ್ರಾಂ ಸೆಣಬು, ಅಲಸಂದಿ ಅಥವಾ ಸೋಯಾ ಅವರೆ ಬೀಜಗಳನ್ನು ಉದರಿಸಬೇಕು. 30 ದಿನಗಳ ನಂತರ ಬೆಳೆದ ಬೆಳೆಯನ್ನು ಕಿತ್ತು ಮಡಿಯಲ್ಲಿ ಸೇರಿಸಬೇಕು. ಇದರಿಂದ ಎರೆಗೊಬ್ಬರದಲ್ಲಿ ಸಾರಜನಕ ಮತ್ತು ಪೋಟ್ಯಾಷ್ ಪ್ರಮಾಣ ಹೆಚ್ಚಾಗುತ್ತದೆ. ನಂತರ ಮಡಿಯ ಮೇಲೆ 7ನೇಯ ಹಾಗೂ ಕೊನೆಯ ಪದರುಗಳಾಗಿ ಹುಲ್ಲು ಅಥವಾ ದಂಟನ್ನು 10-15 ಸೆಂ.ಮೀ. ದಪ್ಪ ಹೊದಿಕೆಯಾಗಿ ಹರಡಬೇಕು. ಮಡಿಗಳಲ್ಲಿ ಕಬ್ಬಿನ ರವದಿ, ಕೊಳೆತ ಭತ್ತದ ಹುಲ್ಲು, ಸೂರ್ಯಕಾಂತಿ ಅಥವಾ ಸಜ್ಜೆಯ ತ್ಯಾಜ್ಯ ವಸ್ತುಗಳನ್ನು ಬಳಸುವುದರಿಂದ ಎರೆಹುಳುವಿನ ಅಭಿವೃದ್ಧಿ ಹೆಚ್ಚಾಗುವುದು ತಿಳಿದು ಬಂದಿದೆ. ಗುಣ ಮಟ್ಟದ ಹಾಗೂ ಅಧಿಕ ಎರೆ ಗೊಬ್ಬರದ ಉತ್ಪಾದನೆಗೆ ಬಾಳೆಯ ದಿಂಡು, ಜೋಳದ ಅಥವಾ ಸೂರ್ಯಕಾಂತಿಯ ತ್ಯಾಜ್ಯ ವಸ್ತುಗಳನ್ನು ಬಳಸಿರಿ. ಇದರಿಂದ ಲಘು ಹಾಗೂ ಮುಖ್ಯ ಪೋಷಕಾಂಶಗಳನ್ನು ಅಧಿಕವಾಗಿ ಹೊಂದಿರುವ ಎರೆಗೊಬ್ಬರ ಪಡೆಯಲು ಸಾಧ್ಯ.

Rating: 

0
No votes yet